Wednesday, April 17, 2013

ಎಂದೋ ಬರೆದ ಹೆಸರಿಡದ ಕವಿತೆ….



ಹಾರಿತು ಹಕ್ಕಿ,
ದಿಗಂತ ಸೇರುವ ನೆಪದಲಿ,
ರೆಕ್ಕೆ ಬಲಿಯದ ಸಮಯದಿ ..

ಮೊದಲ ದಿನ !
ಹಾರಿತು
ತನಗೆ ಸರಿಸಾಟಿ ಯಾರೆಂಬ ಹಮ್ಮೂ-ಬಿಮ್ಮಿನಿಂದ,
ಅಷ್ಟರಲ್ಲಾಗಲೇ ಸಾಯಂಕಾಲ !!?!!

ಎರಡನೆಯದಿನ !
ತಿಳಿಯಿತದಕೆ,
ಅಂತ್ಯವಿರದ ದಿಗಂತ..
ಮರುಳಲಾಗದು ಎಲ್ಲ ಮಂಜು-ಕತ್ತಲು!!?!!

ಕೊನೆಯ ದಿನ !
ರೆಕ್ಕೆ ಸೋತು ನಿದ್ರೆ ಹಾರಿ,
ಸುಮ್ಮನೇ ಕಣ್ಣು ಮುಚ್ಚಲು
ಬಂದು ಧರೆಗುರುಳಿತು!!?!!

ಆ ದಿನ!
ಧರೆಯಲೀ..   
ಪ್ರತಿಫಲದೀ ಸಾವು ಕಾದಿತ್ತು…..!!!!

(Wrote this long back and it was published in sampada.net)

Wednesday, February 6, 2013

ಕನಸ್ಸಿನ ಲಹರಿಯ ಬೆನ್ನು ಹತ್ತಿ .....

     

      ಬೆಳಿಗ್ಗೆ  ಏಳುತ್ತಲೇ ತಲೆ ಭಾರ, ಹೀಗೆ ಯಾವತ್ತು ಆಗಿರಲಿಲ್ಲ ಅಂದು ಕೊಂಡು ಎಂದಿನಂತೆ ನಾನು ಕೆಲಸಕ್ಕೆ ಸಿದ್ದವಾದೆ, ಆದರೆ ಮತ್ತದೇ ಕನಸಿನ ಗುಂಗು, ಏನೋ ಕೆಟ್ಟದ್ದು ನಡೆದ೦ತಹ ಭಾವ, ಬಹಳಾ ಕಷ್ಟ ಪಟ್ಟು ನೆನಪಿಸಿ ಕೊಂಡ ಮೇಲೆ, ಕನಸು ನೆನಪಾಯಿತು,

 ಕನಸಿನ ಸಾರಾಂಶ :
        ನಾವು ವಾಸಿಸುತ್ತಿರುವ ಜಾಗೆಯಲ್ಲಿ ಎಂತದೋ ದುಗುಡ ತುಂಬಿಕೊಂಡಿದೆ. ಎಲ್ಲಕಡೆ ಚೀರಾಟ ಆರ್ತನಾದ, ಅದು ಹೇಗೋ ಏನೋ ವಿಪರೀತವಾಗಿ ಹೊಡೆದಾಟಗಳು, ಅದರಲ್ಲೂ ಮುಖ್ಯವಾಗಿ ಈ ಹೊಡೆದಾಟ ಎರಡು ಗುಂಪಿನ ಮಧ್ಯ ಹಂಚಿದೆ, ನಾನು ಮತ್ತು  ನನ್ನ ಗೆಳೆಯ ಇರುವ ಗುಂಪು ಅಷ್ಟೇನೂ ಭಲಿಷ್ಠವಿಲ್ಲ, ಆದರೆ ನಮ್ಮ ವಿರೋಧಿ ಗುಂಪಿಗೆ ಎಂತದೋ ಸಮರೋತ್ಸಾಹ. 

       ನಾವೆಲ್ಲಾ ಕಟ್ಟಡಗಳ ಮೇಲು ಮಹಡಿಯಲ್ಲಿ ಅಡಗಿ ಕೊಂಡು ಗುಂಡು ಹಾರಿಸುತ್ತಿದ್ದೇವೆ, ವಿರೋಧಿ ಗುಂಪು ಬಹಳೇ ಬಿರುಸಿನಿಂದ ಉತ್ತರಿಸುತ್ತಿದೆ, ಬದುಕುಳಿಯುವ ಯಾವುದೇ ಸಣ್ಣ ಅನುಮಾನವೂ ಇಲ್ಲ. ಕೆಳಗಡೆ ಕಿಡಕಿಯ ಮೇಲೆ ಇರುವ ಸಣ್ಣ -ಸಣ್ಣ ಸ್ಟೆಪ್ ಗಳಿಂದ ಇಳಿದ ನಾವು ಎರಡು ಬಂಗಲೆಯ ನಡುವೆ ಸಾಲು ಸಾಲಾಗಿ ಓಡುತ್ತಿದೇವೆ, ಮೇಲಿಂದ ವಿರೋಧಿ ಗುಂಪು ನಮ್ಮೆಡೆ  ಕೆಲವು ಹುಸಿ ಗುಂಡುಗಳನ್ನ ಹಾರಿಸುತ್ತಿದೆ, ನಾವೆಲ್ಲ ಕೆಳಗಡೆ ಮಹಡಿಯ ಬಾಗಿಲನ್ನ ತಳ್ಳಿಕೊಂಡು ಒಳಗಡೆ ಸೇರಿಕೊಂಡಿದ್ದೇವೆ, ಮೆಲ್ಲನೇ ಒಬ್ಬರಿಗೊಬ್ಬರು ತಾಕಿಕೊಂಡು ಕುಳಿತಿದ್ದೇವೆ, 

       ಮುರನೇಯ ವ್ಯಕ್ತಿಯೊಂದಿಗೆ ವಿರೋಧಿ ನಾಯಕ ಒಂದು ಸಂದೇಶ ಕಳಿಸಿದ್ದಾನೆ. "ನನಗೆ ನಿಮ್ಮ ಪೂರ್ತಿ ಗುಂಪಿನ ಮೇಲೆ ಯಾವುದೇ ದ್ವೇಷವಿಲ್ಲ ಒಂದು ವೇಳೆ ದ್ವೇಷ  ಇದ್ದಿದ್ದೆ ಆದರೆ ಇಷ್ಟರಲ್ಲೇ ನಿಮ್ಮನೆಲ್ಲ ಕೊಂದು ಹಾಕುತ್ತಿದ್ದೆ, ಆದರೆ ನಿಮ್ಮ ಗುಂಪಿನಲ್ಲಿರುವ "L" ಎನ್ನುವ ವ್ಯಕ್ತಿಯನ್ನ ಯಾವುದೇ ಕಾರಣಕ್ಕೂ ಉಳಿಸುವ ಪ್ರಶ್ನೆಯೇ ಇಲ್ಲ, ಅವನನ್ನು ಮಾತ್ರ ನನ್ನ ಹತ್ತಿರ ಕಳುಹಿಸಿ ಕೊಡಿ"      

      ಅಯ್ಯೋ ವಿಧಿಯೇ ಈ "L" ಎನ್ನುವವನೇ ನನ್ನ ಜೀವದ ಗೆಳೆಯ, ನನ್ನೊಳಗೆ ರಕ್ತ ಧಿಮ್ಮ ಎಂದು ಚಿಮ್ಮುತ್ತದೆ, ದಳ-ದಳ ಕಣ್ಣೀರು, ಏನು ಮಾಡೋದು, ಗೆಳೆಯನ್ನನ್ನ ಹೇಗೆ ಉಳಿಸುವುದು, ಮೆಲ್ಲನೆ ಎದ್ದ ನಾನು ಈ ಮೂರನೆ ವ್ಯಕ್ತಿಯ ಜೊತೆ ಹೊರಡುತ್ತೇನೆ, ಎಲ್ಲೆಲ್ಲೊ ತಿರುಗಾಡಿಸಿ ಕೊನೆಗೆ ಯಾವುದೋ ಹಳೆಯ ಬಂಗಲೆಯ ಬಳಿ ನನ್ನನ್ನು ಕರೆತರುತ್ತಾನೆ, ಸಾಲು ಸಾಲು ಕಂಭಗಳ ಮೇಲೆ ಒಂದು ಮಹಡಿ ಇದೆ, ಈ ಸಾಲು ಕಂಬಗಳಿಗೆ ನೆತ್ತರು ಮೆತ್ತಿಕೊಂಡು ಆ ನೆತ್ತರು ಆರಿ ಕಂದು ಬಣ್ಣದ ಕಳೆಗಲಾಗಿವೆ, ಒಳಗಿನ ಕೋಣೆಯಲ್ಲಿಯೇ ನಾಯಕ ಕುಳಿತಿದ್ದಾನೆ, ನನ್ನೆಡೆ ನೋಟ ಬೀರಿ ಮುಂದೆ ಬರಲು ಹೇಳುತ್ತಾನೆ.

ನಾಯಕ : "L" ಅಂದರೆ ನೀನಾ ?

ನಾನು : ಅಲ್ಲ ನಾನು, "L" ಅಲ್ಲ.

ನಾಯಕ : #$%^@????  (ವ್ಯಾಘ್ರ ನೋಟ)

ನಾನು ಬಿಗಿಯಾಗಿ ಅವನ ಕಾಲು ಹಿಡಿದಿದ್ದೇನೆ, ಅಯ್ಯೋ ನಾಯಕ "L" ಎನ್ನುವವ ನನ್ನ ಜೀವದ ಗೆಳೆಯ, ಅವನಿಲ್ಲದೆ ಈ ಜಗತ್ತನ್ನು ನಾನು ಎಂದಿಗೂ ಉಹಿಸಲೂ ಸಾಧ್ಯವಿಲ್ಲ , ದಯವಿಟ್ಟು ಅವನನ್ನು ಬಿಟ್ಟು ಬಿಡು, ನಾಯಕ ಕಾಲು ಜಾಡಿಸುತ್ತಿದ್ದಾನೆ, ನಾನು ಅವನ ಕಾಲನ್ನ  ಬಿಗಿಯಾಗಿ ಹಿಡಿದು ಅಳುತ್ತಿದೇನೆ, ನನ್ನ ಕಣ್ಣೀರು ಕಪಾಳಕ್ಕೆ ದಾಟಿ ಕೆಳಗಿನ ಮಣ್ಣು ಕಣ್ಣೀರಿಗೆ ಅಂಟಿ ಮುಖವೆಲ್ಲ ಮಣ್ಣಾಗಿದೆ. ನಾನು ಗೊಗರೆಯುತ್ತಿದೇನೆ. 

ನಾಯಕ : ಆಯ್ತು ಬಿಡು, ನಿನ್ನ ಗೆಳೆಯನಿಗೆ  ಜೀವದಾನ ಮಾಡಿದ್ದೇನೆ ಅನ್ನುತ್ತಾನೆ. 

ನನಗೆ ಎಚ್ಚರ ವಾಯಿತು, ಆಮೇಲೆ ಶುರುವಾಯಿತು ನೋಡಿ ಈ ಕನಸ್ಸು ಹುಟ್ಟಿದ ಬಗೆ ಅರ್ಥ ಮಾಡಿಕೊಳ್ಳೋ ಹುಚ್ಚು . 

ಕೆಳಗಿನ ಕೆಲವು ಚಿತ್ರಗಳು ಮತ್ತು ಚಲನ ಚಿತ್ರಗಳು ನನ್ನ ಕನಸಿನ ಘಟನೆಗಳಿ ತಳಕು ಹಾಕಿಕೊಂಡಿವೆ, 


   ಈ ಚಿತ್ರ   Coriolanus ಎಂಬ ಚಿತ್ರದ್ದು, ವ್ಯಕ್ತಿ - ಅಭಿಪ್ರಾಯಗಳ ಬೇದದ ಬಗ್ಗೆ ಈ ಚಿತ್ರವಿದೆ. ಈ ಚಿತ್ರದಲ್ಲಿರುವವ ನನ್ನ ಕನಸಿನ ವಿರೋಧಿ ನಾಯಕನಿರಬಹುದು. 




   ನನ್ನ ಕನಸಿನಲ್ಲಿ ಬರುವ ಎರಡು ಕಟ್ಟಡಗಳ ನಡುವೆ ಓಡಿ ಹೋಗುವ ಪ್ರಸಂಗ The Bourne Legacy  ಈ ಚಿತ್ರದ ಫೈಟಿಂಗ್ ಸೀನ್ ನಿಂದ ಬಂದಿದ್ದಿರಬಹುದಾ?



ಕೊನೆಯದಾಗಿ ನಾನು ನನ್ನ ಜೀವದ ಗೆಳೆಯ "L"ನ ಜೀವದಾನಕ್ಕಾಗಿ ಅಳುತ್ತ ಹೊರಳಾಡಿದ ಭಾಗ ಈ ಚಿತ್ರದಿ೦ದ ಬಂದಿರಬಹುದಾ ?






ಇವೆಲ್ಲ ನೋಡಿದ ಮೇಲೆ. ನನ್ನ ಸುಪ್ತಮನಸ್ಸಿನ ಉಹೆಗಳಿಗೆ ಆಕರಗಳನ್ನ ಇವು ಒದಗಿಸಿವೆ ಮತ್ತು ಕೆಲವು ಸಾರಿ ಕನಸ್ಸಾಗಿಯೇ ಮೂಡಿವೆ ಅನಿಸಿದೆ..

ಇಷ್ಟೆಲ್ಲಾ ಸಮಯ ತಗೊಂಡು ಓದಿದ್ದಕ್ಕೆ ನಿಮಗೆ ಥ್ಯಾಂಕ್ಸ್ .. ಏನಾದ್ರೂ ಹೇಳಬೇಕು ಅನಿಸಿದರೆ ಒಂದು ಲೈನ್ ಕಾಮೆಂಟ ಗೀಚಿ,.